`ಸಂತೆಯಲ್ಲಿ ನಿಂತ ಕಬೀರ` ಡಿ ಟಿ ಎಸ್ ಹಂತಕ್ಕೆ
Posted date: 14 Mon, Mar 2016 – 09:38:59 AM

ಕನ್ನಡ ಚಿತ್ರ ರಂಗದಲ್ಲಿ ಮತ್ತೊಂದು ಬಹು ದೊಡ್ಡ ಸಿನೆಮಾ ಸಂತ ಕಬೀರನ ಕಾಲ ಘಟ್ಟಕ್ಕೆ ಕರೆದೊಯ್ಯುವ ಸಿನಿಮಾ ಈಗ ಡಿ ಟಿ ಎಸ್ ಹಂತಕ್ಕೆ ಬಂದು ತಲುಪಿದೆ. ಏಪ್ರಿಲ್ ಮೊದಲ ವಾರದಲ್ಲಿ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದ ಧ್ವನಿ ಸುರುಳಿಗೆ ಒಂದು ಸುಂದರ ಸೆಟ್ ಹಾಕಿಸಿ ನಿರ್ದೇಶಕ ನರೇಂದ್ರ ಬಾಬು ಅವರು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಿದ್ದಾರೆ. ಧ್ವನಿ ಸುರುಳಿ ಬಿಡುಗಡೆ ಸಮಯದಲ್ಲಿ ಸಂತ ಕಬೀರನ ಕಾಲವನ್ನು ಪರಿಚಯಿಸುವುದು ಅವರ ಉದ್ದೇಶ.

ಕನ್ನಡ ಸಿನಿಮಾ ರಂಗದಲ್ಲಿ ಬಹು ನಿರೀಕ್ಷಿತ ಚಿತ್ರ ‘ಸಂತೆಯಲ್ಲಿ ನಿಂತ ಕಬೀರ’ ಡಾಕ್ಟರ್ ಶಿವರಾಜಕುಮಾರ್ ಮುಖ್ಯ ತಾರಾಗಣದ ಚಿತ್ರ ೧೫ನೇ ಶತಮಾನದ ಸಂತನಾದ ಕಬೀರ ಕುರಿತ ಚಿತ್ರ ಭೀಷ್ಮ ಸಾಹ್ನಿ ಅವರ ಕಥೆ ಆಧಾರಿತ. ಚರಿತ್ರೆಯ ಪುಟಗಳಲ್ಲಿ ಸೇರಿರುವ ಮಹಾನ್ ವ್ಯಕ್ತಿಯ ಚಿತ್ರಣ.

ಬಹಳ ಉತ್ಸಾಹದಿಂದ ನಿರ್ದೇಶನ ಮಾಡಿರುವ ರಾಜ್ಯ ಪ್ರಶಸ್ತಿ ವಿಜೇತ ಕಬ್ಬಡ್ಡಿ ಸಿನಿಮಾದ ನಿರ್ದೇಶಕ ನರೇಂದ್ರ ಬಾಬು ಈ ಸಿನಿಮಾ ಇಂದ ಇಂದ್ರ ಬಾಬು ಆಗಿದ್ದಾರೆ. ೪೮ ದಿವಸಗಳ ಕಾಲ ಅವರು ನವೀನ್ ಕುಮಾರ್ ಐ ಅವರ ಛಾಯಾಗ್ರಹಂದಲ್ಲಿ ಬೆಂಗಳೂರು, ಕೆ ಆರ್ ಎಸ್ ಹಿನ್ನೀರು, ಚಿಕ್ಕಮಗಳೂರು ಹಾಗೂ ಚಾಲಾಕುಡಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಇಸ್ಮೈಲ್ ದರ್ಬಾರ್ ಅವರ ಸಂಗೀತ ಇರುವ ಈ ಚಿತ್ರಕ್ಕೆ ಸಂತ ಕಭೀರರ ‘ದೋಹಾ’ ಮುಖ್ಯವಾಗಿ ಕಾಣಿಸಿಕೊಳ್ಳುವುದು. ಐದು ಹಾಡುಗಳು ಹಾಗೂ ನಾಲ್ಕು ದೋಹಗಳು ರಜತ ಪರದೆಯಲ್ಲಿ ಆಕರ್ಷಿಸಲಿದೆ. ಗೋಪಾಲ ವಾಜಪೇಯಿ ಅವರ ಗೀತ ಸಾಹಿತ್ಯ, ಚಿತ್ರಕಥೆ ಹಾಗೂ ಸಂಭಾಷಣೆ ಇದೆ. ವಿಶ್ವ ಈ ಚಿತ್ರದ ಸಂಕಲನಕಾರರು.

ಸುಬ್ರಮಣ್ಯ ಪ್ರೊಡಕ್ಷನ್ ಅಡಿಯಲ್ಲಿ ಹೊಸಪೇಟೆಯ ಕುಮಾರಸ್ವಾಮಿ ಪತ್ತಿಕೊಂಡ ನಿರ್ಮಾಣದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್, ದತ್ತಣ್ಣ, ಅವಿನಾಷ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಪ್ರಶಾಂತ್ ಸಿದ್ದಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed